ಮಾಸಿದ ಬಟ್ಟೆ ಹೇಸಿಗೆ ತೊಳೆಯಲು
ಕೆರೆಕಟ್ಟೆ ದಂಡೆಯಲ್ಲಿ ಕೂಟ ಸೇರಿವೆ
ಒಗೆದರೂ ಹೋಗದು, ಬಡಿದರೂ ಜಗ್ಗದೂ
ಜಿಗುಟು ಕಲೆಯು ಜೋರಾಗಿ ಅಂಟಿಹುದು
ಅಳೆಯಲು ಕೂತವು ಕೊಳಕಿನ ತೂಕವ
ಒಗೆಯುತ್ತಾ, ಬಗೆಯುತ್ತಾ ಅರಿವಿಲ್ಲದೆ ಕೆದಕುತ್ತಾ
ಅಳೆದರೂ, ಸೆಳೆದರೂ ಕಳೆಯದ್ದೂ ಅಂಟು
ಹಳಿದರೂ, ಹರಿದರೂ ಮುಗಿಯದ ಗಂಟು
ನೇಸರನ ಕಾವು ಒಡಲೊಳಗೆ ಹೊಕ್ಕಾಗ ಹೊರಟವು ಹಟ್ಟಿಗೆ,
ಹೊಟ್ಟೆಯ ಮುಂದೆ ಹೊಲಸೇನು? ಕೆಸರೇನು? ಎಂದು
Leave a Reply