ಹುಟ್ಟು ಹುಚ್ಚಿಯಲ್ಲ

ಹುಟ್ಟು ಹುಚ್ಚಿಯಲ್ಲಾ ನಾನು 
ತುಸು ಹೆಚ್ಚೇ ಕನಸ್ಸು ಹೊತ್ತವಳು

ಸರಿ ತಪ್ಪುಗಳ ತಿದ್ದಿ ತೀಡುವಿಕೆಯ
ತೊಳಲಾಟದಲ್ಲಿ ಹುಚ್ಚಿಯಾದೆ 

ತಪ್ಪು ದಾರಿಯ ಒಪ್ಪು ಮಾಡುವ ತವಕದಲ್ಲಿ 
ಕಪ್ಪು ಕಾಡಲಿ ಕಳೆದು ಹೋಗಿ ಹುಚ್ಚಿಯಾದೆ

ಮೆಲ್ಲ್ ದನಿಯು ಎಲ್ಲೂ ಕೇಳದಾದಾಗ
ಮೇಲ್ ದನಿಯಲಿ ಕೂಗಿ ಕೂಗಿ ಹುಚ್ಚಿಯಾದೆ

ಅಚ್ಚುಕಟ್ಟಾಗಿ ಸ್ವಚ್ಛತೆಯ ಕಾಪಾಡಲು 
ಅಚ್ಚೊಳಗೆ ಎರೆಯುವಾಗ ಹುಚ್ಚಿಯಾದೆ

ಎಲ್ಲವನ್ನೂ ಬದಲಿಸಿ ಬಿಡುತ್ತೇನೆ 
ಎನ್ನುವ ಭ್ರಮೆಯಲ್ಲಿ ಹುಚ್ಚಿಯಾದೆ

ಹುಟ್ಟು ಹುಚ್ಚಿಯಲ್ಲ ನಾನು!

Comments

Leave a Reply

Your email address will not be published. Required fields are marked *