ಮಹಡಿ ಮೇಲಿನ ಪೆಟ್ಟಿಗೆ
ಮತ್ತೊಮ್ಮೆ ಮೆತ್ತಗೆ ತೆರೆಯಲು
ಮಸುಕಾದ ನೆನಪಿಗೆ ಹೊಸ ಕಾವ್ಯದ ಹೊಳಪು
ಮಧುರ ನೆನಪಿನ ಮಾಲೆ
ಮರೆಸಿತೆಲ್ಲಾ ಮಾತಿನ ಅಲೆ
ಒಂಟಿ ಕೋಣೆಯಲ್ಲೂ ಜಂಟಿಯಾಯಿತು ಮೌನದೊಂದಿಗೆ ಹಳೆ ನೆನಪ ಓಲೆ
ಮೋಡ ಸರಿದ ಸೆರಗಲ್ಲಿ ಸೇರಷ್ಟು ಕನಸಿತ್ತು
ಧೋ ಎಂದು ಸುರಿಯದೆ ಬಚ್ಚಿಟ್ಟ ಗುರುತ್ತಿತ್ತು
ಭಾವದ ಕಾವು ತಾಕಲು ಹವಣಿಸಿತು ಮತ್ತೊಮ್ಮೆ ಬದುಕಲು (ಮರುಹುಟ್ಟಲು)
Leave a Reply