ಭಾವದಲಿ ನಾನೀಗಲೂ ಒಂಟಿ
ನೀ ಕಲ್ಲಾದದ್ದು ನನ್ನರಿವಿಗೆ ಬರಲಿಲ್ಲ
ಏಕೆಂದರೆ ನಾನಿನ್ನೂ ಬೇಡುವುದ ಬಿಟ್ಟಿರಲಿಲ್ಲ
ಬಾಡಿದ ಮೇಲೆ ಮಲ್ಲಿಗೆಗೆ ಬದುಕುಂಟೇ
ಬೇಡಿಕೊಂಡರು ಕಲ್ಲು ದೇವರನು
ಹೆಚ್ಚು ಕೆದಕಿದರೆ ಕಣ್ಣೀರು ಗ್ಯಾರಂಟಿ
ಏಕೆಂದರೆ ನಾನು ಭಾವದಲಿ ಈಗಲೂ ಒಂಟಿ
ನೀ ನನಗೆ ಕೇಳುವ ಕಿವಿಯಾಗುವುದು ಬೇಡ
ತಲೆ ಇಡಲು ತಾಯಿಯ ಮಡಿಲಾಗು ಸಾಕು.
Leave a Reply