ಕೊಟ್ಟಿಗೆಯ ಗೌರಿ

ಮನೆಮಗಳು ಅರೆ ಹೊಟ್ಟೆಯಲಿ ಹೊರಟಿಹಳೆಂದು ಗೌರಿಯು ಕೊರಳುಬ್ಬಿ ಕನವರಿಸತೊಡಗಿದಳು

ಚಿಗರಿಯ ಕಾಲುಗಳು ಬಲಹೀನವಾಗಿರಲು 
ತವರಿನ ದಾರಿ ಮಗಳಿಗೆ ಬಲು ದೂರವಾದಂತಿದೆ

ದಣಿದು ಹಿಂದಿರುಗಿಹಳು ಹಿರಿಮಗಳು
ದಾರಿಹೋಕರೆ  ದಯಮಾಡಿ  ಪ್ರಶ್ನೆಮಾಡಬೇಡಿ

ಅಂಬಿಗನು ನದಿಯ ದಾಟಿಸುವಾಗ ಧೈರ್ಯ ತುಂಬಲಿ ಹೆಣ್ಣು ಹರಿವ ನೀರು, ಬತ್ತದಿರಲಿ  ಎಂದು 

ಹಬ್ಬ ಹರಿದಿನವಿಲ್ಲ ತೇರು ತೆನೆ ಕಟ್ಟಿಲ್ಲ ತವರೇನು
ಎಂದು ಅರಳಿಮರದಡಿಯ ಅಜ್ಜಿ ಕೆಣಕದಿರಲಿ 

ನನ್ನ ಬಡಕಲು ಕೆಚ್ಚಲ್ಲಲ್ಲೂ ಹಾಲಿನ ಸೊನೆ ಒಸರಿ   ಬೆಣ್ಣೆ ತುಪ್ಪವ ಉಣ್ಣಲಿ ತಾಯಿ ಇಲ್ಲದ ಈ ತವರಲಿ.

Comments

Leave a Reply

Your email address will not be published. Required fields are marked *