ತಲೆಯ ಹುಣ್ಣು 

ಸಿಕ್ಕು ಬಿಡಿಸಲು ಕೂದಲೊಳಹೊಕ್ಕ ಬಾಚಣಿಗೆಯ ದಿಕ್ಕು ಬದಲಿಸಿದ್ದು ತಲೆಯ ಹುಣ್ಣು

ಮಿಕ್ಕ ಜನರದ್ದು ಬರಿಯ ಮಾಸಿ ಕೆದರಿದ
ಎಣ್ಣೆ ಕಾಣದ ಕೂದಲಿನ ಗೊಣಗು 

ಹೆಣೆಯಲಾರೆನೆಂದ ಹಣಿಗೆಯ ಹಲ್ಲುಗಳಿಗಷ್ಟೇ 
ಅರಿವಾಗಿದ್ದು ಹಸಿ ಹುಣ್ಣಿನ ಅಳಲು  

ಸಂತೆ ಹೊಕ್ಕವರೆಷ್ಟು, ಅಂತೆಕಂತೆಗೆ ಕಿವಿಗೊಟ್ಟವರೆಷ್ಟು ಬರಿಯ ನಿಂದಿಸುತ ಕಾಲ ಕಳೆದವರೆಷ್ಟು! 

Comments

Leave a Reply

Your email address will not be published. Required fields are marked *