ನಾನ್ಯಾರು ನಿನಗೆ?

ನಾನ್ಯಾರು ನಿನಗೆ???
ಕಡಲ ತಡಿಯಲಿ ಭೋರ್ಗರೆವ ಅಬ್ಬರದ ತೆರೆಯೋ? ನಡುಗಡಲ ಶಾಂತ ಶರಧಿಯೋ?

ಸಂಜೆಯ ತಂಪು ತಂಗಾಳಿಯೋ?
ಸುಡು  ಬೇಸಿಗೆಯ ಬಿಸಿ ಧಗಿಯೋ?

ಪ್ರತಿ ಹೆಜ್ಜೆಗೂ ಜೊತೆಯಾಗುವ ಹೆಜ್ಜೆಯೋ?

ಒಡಲಾಳದಿ ಜೀವಕೋಟಿಯ ಹೊತ್ತ ತಾಯಿ ಮಡಿಲೋ?
ಸಾಗರದಂಚಲಿ ದಿಗಂತವ ತಬ್ಬುವ ಅಪ್ಪುಗೆಯೋ
ನಾನ್ಯಾರು ನಿನಗೆ???

Comments

Leave a Reply

Your email address will not be published. Required fields are marked *