ಪ್ರೇಮ ಕಾವ್ಯ

ಪ್ರೇಮ ಕಾವ್ಯಕ್ಕೆ ನಿನ್ನುಸಿರೆ ಶೀರ್ಷಿಕೆ 
ಕೊನೆಯಾಗಿಸು ಬೇಗ ಈ ನನ್ನ ಕಾತರಿಕೆ

ಪ್ರಯಾಸವೇ ಬೇಡ ಪ್ರಾಸಕ್ಕೆ
ಪ್ರತಿ ಮಾತಲ್ಲೂ ಇರಲು ಮುತ್ತಿನ ಹೊದಿಕೆ 

ಬಳಿ ನೀನೆ ಇರಲು ಭಾವಕ್ಕೆಲ್ಲಿಯ ಕೊರತೆ
ಮುಗುಳ್ನಗೆಯೇ ಹೂರಣವು ಪಲ್ಲವಿ ಚರಣಕ್ಕೆ 

ಮತ್ತೊಮ್ಮೆ ಜೊತೆಯಾಗಿ ಬರೆಯುವ ಬಯಕೆ 
ಹಾಗಾಗಿ ಕಾದಿರುವೆ ನಿನ್ನಯ ಆಗಮನಕ್ಕೆ.

Comments

Leave a Reply

Your email address will not be published. Required fields are marked *