ಮನೆಯಲ್ಲಿರಲು ಮರುಕವೇಕೆ? ನಿಮಗೆ ನೆಮ್ಮದಿಯಿಂದ ಸುರಕ್ಷಿತವಾಗಿರಲು ಮನೆಯಾದರೂ ಇದೆ. ಆದರೆ ಅದೆಷ್ಟು ಜನ ಬೀದಿಯಲ್ಲಿ ಮಲಗುವವರಿಗೆ ಎಲ್ಲಿಯ stay home?? ಎಲ್ಲಿಯ stay safe??
ಒಂದು ಹೊತ್ತು ಊಟಕ್ಕೂ ಕಷ್ಟವಿರುವ ಅವರೆಂದೂ ಸಾಗರದಾಚೆಯ ಯಾನವನ್ನು ಕನಸಲ್ಲೂ ಕಂಡಿರಲಿಕ್ಕಿಲ್ಲ. ಆದರೂ ಸಿರಿವಂತರ ಸುತ್ತಾಟದಿಂದ ಹೊತ್ತು ತಂದುದರ ನೇರ ಪರಿಣಾಮವನ್ನು ಹೋರಲಾರೆ ಎಂದು ಹೇಳವ ಶಕ್ತಿ ಯೂ ಅವರಿಗಿಲ್ಲ. ಹೀಗಿರುವಾಗ, ಎಲ್ಲವನ್ನು ಹೊಂದಿರುವ ನೀವುಗಳು ಇನ್ನೆಲ್ಲಿಗೆ ಹೊರಟಿರುವಿರಿ? ಪ್ರಪಂಚದ ಓಟ, ಕಾಲಚಕ್ರದ ವೇಗ, ಎಲ್ಲವನ್ನು ಮೀರಿದ ವೇಗದಲ್ಲಿ ಓಡಿ ಓಡಿ ದಣಿದ ಕಾಲುಗಳಿಗೆ ಸದ್ಯಕ್ಕೆ ಒಂದು ಅಲ್ಪ ವಿರಾಮದ ಅವಶ್ಯಕತೆ ಇದೆ. ಇದರಿಂದ ಕೊರೊನಾ ತಡೆಗಟ್ಟುವುದಷ್ಟೇ ಅಲ್ಲದೆ ವಾಹನ ದಟ್ಟಣೆಯಿಲ್ಲದೆ ಮಾಲಿನ್ಯವೂ ನಿಯಂತ್ರಿತವಾಗಿ, ಪ್ರಕೃತಿಮಾತೆ ಒಂದಿಷ್ಟು ದಿನ ನೆಮ್ಮದಿಯಿಂದ ಉಸಿರಾಡಲಿ.
Leave a Reply